Sunday, March 29, 2020

ಕನಸು ಕಂಗಳ ಹುಡುಗಿ...


ಜೀವದ ಜೀವ 

ಬೆರೆತಿರಲು ನಿನ್ನಲಿ 


ಕಾಣುತಿರುವೆ ಹೊಂಗನಸ 


ಮರೆಯುತ ನೋವ... 



ಒಲವಿನ ಭಾವಕೆ 


ಪ್ರೀತಿಯ ಬೆಸುಗೆಯ


ಹಾಕಲು ಬೇಡುವೆ 


ಆ ನಿನ್ನ ಮನವ... 



ಚಡಪಡಿಸೋ ಕನಸುಗಳ 


ಬಿಗಿಹಿಡಿಸೋ  ಮನಸುಗಳ 


ಬೆಂಬಿಡದೇ ಕಾಡುತಿದೆ 


ಮರೆಯಲಾರದ ಆ ನಿನ್ನ ಸಿಂಗಾರವ ... 



ಗೆಳತಿ , ಸುಂದರಾಂಗಿ ನೀನು 


ಬೆಳದಿಂಗಳ ಬೆಡಗಿ ನೀನು 


ನೀ ಬರುವ ಹಾದಿಯನ್ನೇ 


ನನೆನೆಯುತಿರುವೆ ನಾನು... 


                                            -   ಶಂಕರ್ ಮೋನಿ 





ಸ್ಫೂರ್ತಿ...



ಮತ್ತದೇ ಮೌನ

ಚಿಗುರುತಿದೆ ಗಾನ


ಹುಣ್ಣಿಮೆ ಚಂದ್ರನ 


ಬೆಳಕಿಗೆ ಕಾದೆನಾ .... 



ಮುದ್ದು ಮುಖದ ಹುಡುಗಿ 


ಬೆಳದಿಂಗಳಾ ಬೆಡಗಿ 


ಬೆಳಗಿನ ನಕ್ಷತ್ರದ ಹಾಗೆ 


ಮಿನುಗುತಿರು ಎಂದೆಂದೂ... ಮುಂದೆಂದೂ... 



ಚಡಪಡಿಸುವ ಮನಕೆ  


ಉಸಿರಾಗಿರು ಚೆಲುವೆ


ತಳಮಳಿಸುವ ಹೃದಯಕೆ 


ಜೀವವಾಗಿರು ನನ್ನೊಲವೆ.... 


                                  ಶಂಕರ್ ಮೋನಿ