Thursday, February 23, 2012

ಇನ್ನೇನು ಬೇಕು...

 ಬೆಳ್ಳಿ ಮೋಡದಲ್ಲಿ
ಸೂರ್ಯನ ಕಿರಣಗಳು
ಅವಿತು ಕೊಂಡಂತೆ

                         ಸಮುದ್ರದ ಚಿಪ್ಪಿನೊಳು
                             ಸ್ವಾತಿ ಮಳೆ ಹನಿ
                           ಮುಚ್ಚಿಕೊಂಡಂತೆ

ಮನಸ್ಸಿನ  ಕನ್ನಡಿಯೊಳಗೆ
 ನಿನ್ನನ್ನು  ನಾ ಕಂಡಂತೆ

                       ಕಣ್ಣ ಮುಂದೆಯೇ ಬಂದು
                    ಮಿಂಚಿನಂತೆ ಮರೆಯಾದಂತೆ

ಯಾವಾಗಲು ಪಿಸುಗುಡುವ
    ಪ್ರೀತಿಯ ಹಾಡಂತೆ

                    ಮನಸ್ಸಿನ ಭಾವನೆಗಳು
                       ಬೇರೆಯಲಿಕ್ಕೆ ಆ
                   ನಿನ್ನ ನಗುವಷ್ಟೇ ಬೇಕು

  ಮನಸ್ಸು ತುಂಬಾ ಚಂಚಲ 
ಎಂದಿಗೂ ಹರಿಬಿಡೆನು ಗೆಳತಿ
ಜೀವಕೆ ಜೀವ ನೀನಾಗಿರುವಾಗ
ಬೇರಿನ್ನೇನು ಬೇಕು ಪ್ರೀತಿಸುವ 
ಹೃದಯಕೆ ಅದೊಂದೇ ಸಾಕು.
                             ಶಂಕರ್. ಎಂ