Friday, January 27, 2012

ಹೃದಯ ಗೆದ್ದವಳಿಗೆ...


ನಲ್ಮೆಯ ಗೆಳತಿ
ನನ್ನೊಲುಮೆಯ ಒಡತಿ
ಕಣ್ಣ ರೆಪ್ಪೆಯಲ್ಲೇ ಕೋಲ್ಮಿಂಚಿನಂತೆ
ಹಾದು ಹೋಗುವ ನೀನು 
ಮನಸ್ಸಿಂದ  ಮರೆಯಾದದ್ದೇ
ಗೊತ್ತಾಗಲಿಲ್ಲ, ಆದರೂ
ಹೃದಯದ ಅದಾವುದೋ
ಮೂಲೆಯಲ್ಲಿ ಪಿಸುಗುದುತ್ತಿರುವೆ

ಹಾಲುಗೆನ್ನೆಯ ಪಿಸುಮಾತಿನ
ನಸುನಗೆಯ ಅ ನಿನ್ನ
ಪ್ರತಿ ಭಾವವು,
ಮುಗುಳ್ನಗೆಯನ್ನ 
ಮೂಡಿಸುತ್ತಿವೆ ನನ್ನಲ್ಲಿ

ಅದ್ಯಾಕೋ ನಂಗೊತ್ತಿಲ್ಲ
ಹೃದಯದ ಭಾವಕೆ
ಪ್ರೀತಿಯ ಹಾಡಿಗೆ 
ಕೊರಳಗುತ್ತಿರುವೆ ನೀನು
ಪ್ರಶ್ನೆಯಾಗಿಯೇ
ಉತ್ತರವಿಲ್ಲದ ಹಾಗೆ... 

                   ಶಂಕರ್ ಎಂ