Monday, February 14, 2011

ಜೊತೆಯಲಿ... ಜೊತೆ ಜೊತೆಯಲಿ...!!!

ಜೊತೆಯಲಿ... ಜೊತೆ ಜೊತೆಯಲಿ...!!!

ಆ ನಿನ್ನ ಮುದ್ದಾದ ಮಾತು
ಮನ ಸೆಳೆಯುವ ನಗು
ಮೈ ಮರೆಸುವ ನೋಟ
ಗೆಳತಿ, ಎಷ್ಟು ಹೊಗಳಲಿ ನಿನ್ನನ್ನ
ನಿನ್ನ ಚೆಲುವನ್ನ,

 ಗಂಧದ  ಬಣ್ಣದ  
ದಂತದ ಗೊಂಬೆ
ರೆಪ್ಪೆ ಬಡಿಸುತ ನನ್ನ ತೋಳ 
ತೆಕ್ಕೆಯಲ್ಲಿ ಮಗುವಾಗುವ ನೀನು
ಬಂಜರು ಭೂಮಿಯ ಓಯಸಿಸ್ 
ಆಗಿರುತ್ತಿದ್ದೆ ನಾನು,

ಜನುಮದ ಗೆಳತಿ
ಹೃದಯದ ಒಡತಿ
ಜೊತೆಯಾಗಿರು ಕಣ್ಣು 
ಮುಚ್ಚುವ ತನಕ
ಬೆಳಕಾಗಿರು ದೀಪ
ಮಾಸುವ ತನಕ.
                         ಶಂಕರ್.ಎಂ