ಗೆಳತಿ... ಎಲ್ಲೇ ಇರು.. ಹೇಗೆ ಇರು.. ಚೆನ್ನಾಗಿರು....
ಮನಸು ಮನಸುಗಳ ಪಿಸುಮಾತು ಹೃದಯಗಳ ಸರಿಗಮ ಎರಡು ಒಂದೇ ಎಂದು ಹೇಳುತ ನನ್ನ ಜೊತೆ ತಿರುಗಾಡುತ್ತಿದ್ದೆಯಲ್ಲ ನಿಜವಾಗಲು ಕಣೆ ನನಗೇನು ಅರ್ಥ ಆಗ್ತಿರಲಿಲ್ಲ ನಿನ್ನ ಕೋಲ್ಮಿಂಚಿನಂತಹ ನಗು, ನಿನ್ನ ಒಗಟುಗಳ ಮಾತುಗಳಿಗೆ ನಿನ್ನಲ್ಲಿ ನಾ ಮಿಂದು ಹೋಗಿರುತ್ತಿದ್ದೆ, ನಿನಗೆ ಎಷ್ಟು ಹೇಳಿದರೂ ಕ್ಲಾಸಿಗೆ ಚಕ್ಕರ್ ಹೊಡೆದು ನಾವು ಸೇರೋ ಜಾಗಕ್ಕೆ ಬಂದು ನಾ ಬರುವವರೆಗೂ ಒಬ್ಬಳೇ ಕಾಯುತ್ತಿರುತ್ತಿದ್ದೆ. ನಾನು ಹಲೋ ಎಂದು ಹೇಳೋ ಮುಂಚೆನೇ ನನ್ನನ್ನ ತಬ್ಬಿಕೊಂಡು ಕಣ್ಣೀರಿಟ್ಟಿದ್ದು ನನಗೆ ತಿಳಿಯುತ್ತಿದ್ದುದು ಶರ್ಟ್ ಒದ್ದೆಯಾಗಲೇ. ತುಂಬಾ ಪ್ರೀತಿ ನನ್ನನ್ನ ಕಂಡ್ರೆ ನಿನಗೆ, ನನಗೂ ಅಷ್ಟೇ ಅದೆಷ್ಟೋ ಬಾರಿ ಇಬ್ಬರೂ ಜೊತೆಗಿದ್ದಾಗ ನಮ್ಮ ಮುಂದಿನ ಭವಿಷ್ಯದ ಬಗ್ಗೆ ಚರ್ಚೆ ಮಾಡ್ತಿದ್ದಿವಿ ಸರಿ ಹೋಗಲಿಲ್ಲ ಅಂದ್ರೆ ಜಗಳ ಮಾಡ್ತಾ ಇದ್ವಿ ಹೌದು ಕಣೆ ಆ ಮುದ್ದಿನ ಕ್ಷಣಗಳನ್ನು ನನಗೆ ಮರೆಯೋಕಾಗಲ್ಲ, ನಮ್ಮ ಕಾಲೇಜಿನಲ್ಲಿ ತುಂಬಾನೇ ಕಾಳಜಿ ಮಾಡ್ತಾ ಇದ್ರು ನಮ್ಮನ್ನ, ನಮ್ಮ ನಿಷ್ಕಳಂಕ ಪ್ರೀತೀನ.
ನೀನು ಮೊದಮೊದಲು ಕಾಲೇಜಿಗೆ ಬಂದಾಗ ಎಷ್ಟು ಜೋರಾಗಿದ್ದೆ, ನೀನು ಮಾಡೋ ಪ್ರತಿಯೊಂದು ಸ್ಟೈಲ್ ಗೂ ಎಲ್ಲರೂ ಬೆರಗಾಗುತಿದ್ದರು ನಾನೂ ಕೂಡ ಅದಕ್ಕೆ ಹೊರತಾಗಿಲ್ಲ. ಹೇಗೆ ನೀನು ನನಗೆ ಫ್ರೆಂಡ್ ಆದೆ ನನ್ನ ಯಾಕೆ ಇಷ್ಟು ಹಚ್ಕೊಂಡೆ ನಿಜಕ್ಕೂ ಅದು ಮಿಲಿಯನ್ ಡಾಲರ್ ಪ್ರಶ್ನೆ ? ತಾಯಿ ಇಲ್ಲದೆ ಬೆಳೆದ ನೀನು ಅದೆಷ್ಟು ಪ್ರೀತಿ ವಂಚಿತಳಾಗಿದ್ದೆ ಅಂತ ಗೊತ್ತು ಕಣೆ ಇದು ನನಗೆ ತಿಳಿದಿದ್ದು ಮೊದಲ ಬರಿ ನಿಮ್ಮನೆಗೆ ಬಂದಾಗ ಪಾಪ ನೀನು ಚಿಕ್ಕವಳಿದ್ದಾಗ ತೀರಿ ಹೋಗಿದ್ರು, ಅಪ್ಪ ದೊಡ್ಡ ಬಿಸಿನೆಸಮನ್ ಊರೂರು ಸುತ್ತುತಾ ಇದ್ರು ಕೇಳಿದ್ದು ಸಿಕ್ತಿತ್ತು ಪ್ರೀತಿ ಒಂದನ್ನು ಬಿಟ್ಟು. ನನ್ನ ಜೊತೆ ಇರೋ ಗೆಳೆಯರೆಲ್ಲ ಎಷ್ಟೋ ಬಾರಿ ನನ್ನನ್ನು ಕೇಳಿದರೆ ನೀನು ಏನು ಹೇಳ್ತಿದ್ದಿ ಅಂತ ನಂಗೊತ್ತು, ನಾನು ನಿನ್ನ ಮೊದಲ ಬಾರಿ ತುಂಬಾ ಹತ್ತಿರದಿಂದ ನೋಡಿದ್ದು ನಿಮ್ಮ ಸ್ವಾಗತ ಸಮಾರಂಭದಲ್ಲಿ ಕೇಸರಿ ಕೆಂಪು ಮಿಶ್ರಿತ ಸೀರೆ ತೊಟ್ಗೊಂದು ಕೈಯಲಿ ಗುಲಾಬಿ ಹಿಡಿದು ಕೂತಿದ್ದೆ ನೀನು ತುಂಬಾ ಲಕ್ಷಣವಾಗಿದ್ದೆ, ಟಾಪ್ ಮಾಡೆಲ್ ತರ ಸಮಾರಂಭ ಆರಂಭವಾಯ್ತು ನಿಮ್ಮನ್ನೆಲ್ಲ ಸ್ವಾಗತ ಮಾಡಲಿಕ್ಕೆ , ಹುಡುಗಿಯರ ವಿಷಯದಲ್ಲಿ ತುಂಬಾ ಚೂಸಿಯಗಿದ್ದ ನನ್ನ ನೀ ಕರೆದು could you take this rose ಅಂತ ಕೊಟ್ಟೆ ಮಾತು ಹೊರಡಲಿಲ್ಲ ಸುಮ್ನೆ ತಗೊಂಡೆ ನಂತರ ಕೊನೆಗೊಂದು thanx . ನೀ ಕೊಟ್ಟ ಹೂವನ್ನೇ ನಿನಗೆ ಕೊಡ್ತೀನಿ ಅಂತ ಕೊನೆವರೆಗೂ ನಂಗೊತ್ತಿರಲಿಲ್ಲ ಕಣೆ, ಆಮೇಲೆ ನಿನಗೆ ಗೊತ್ತಿದೆ. ಪ್ರತಿಯೊಂದು ವಿಷಯದಲ್ಲೂ update ಇರುತ್ತಿದ್ದ ನಾನು ಯಾರೊಂದಿಗೂ ಜಾಸ್ತಿ ಬೆರೆಯುತ್ತಿರಲಿಲ್ಲ ಗೊತ್ತಿದ್ದೋ ಗೊತ್ತಿಲ್ದೇನೋ ನೀನು ನನ್ನನ್ನ ಅವರಿಸಿಕೊಂಡಿದ್ದೆ talents day ದಿನ ಪಕ್ಕದಲ್ಲಿ ಬಂದು ಆಡಿದ ಮಾತು ಈಗಲೂ ನನ್ನ ಕಿವಿಯಲ್ಲಿ ಗುಯ್ಗುಟ್ತಾಯಿದೆ "ರೀ ನಿಮಗೆ ನನ್ನನ್ನ ಕಂಡ್ರೆ ಇಷ್ಟಾನ", ನೀನು ತಮಾಷೆಗೆ ಹೇಳಿದ್ದೋ ನಿಜವಾಗಲೂ ಹೇಳಿದ್ದೋ ತಿಳಿಯಲಿಲ್ಲ ನಾನೂ ಕೂಡ ಊಂ... ಅಂತ ತಲೆ ಅಲ್ಲಾಡಿಸಿದೆ ಅದಾದ ಮೇಲೆ ಆ ಎರಡು ವರ್ಷ ಹೇಗೆ ಕಳಿತೋ ಗೊತ್ತಾಗಲಿಲ್ಲ, ನೀನು ನನ್ನ ಜ್ಯೂನಿಯರ್ ಆದ್ರೂ ಕ್ಲಾಸಮೆಟ್ ತರ ವರ್ತಿಸುತಿದ್ದೆ ಇಡೀ ಕ್ಯಾಂಪಸ್ ತುಂಬಾ ನಮ್ದೇ ಮಾತು ನಂಗೊತ್ತು ಕಣೆ ಅದು ನಿನ್ನ ತಪ್ಪಲ್ಲ ಅಂತ ಹಾಸಿಗೆ ಹಿಡಿದ ಅಪ್ಪನ ನೋಯಿಸದೆ, ನನ್ನನ್ನು ಬಿಟ್ಟಿರಲಾರದೆ, ಒದ್ದಾಡಿದ್ದು ಆಡಿನ ಪಾರ್ಕಲ್ಲಿ ಅತ್ತಿದ್ದು, ನಂತರ ಇಲ್ಲಿರುವದನ್ನೆಲ್ಲ ಮಾರಿ ಅಪ್ಪನ ಆಸೆಯಂತೆ ಮದುವೆಯಾಗಿ ಜರ್ಮನಿ ಸೇರಿದ್ದು, ನೀನು ಅಲ್ಲಿಗೆ ಹೋಗಿ 8 ವರ್ಷ ಆದರೂ ನನ್ನ ಮನಸ್ಸಿಂದ ಆರಿಲ್ಲ.
ಕ್ಷ ಣ ಕ್ಷ ಣ ...
ನವ-ನವೀನ
ಭಾವಗಳ ಹೊತ್ತು
ನೋವು ನಲಿವುಗಳ
ಜೊತೆಯಲ್ಲೇ ಪ್ರೀತಿಯ
ಪಯಣ ಸಾಗಿದ್ದ ನಮ್ಮಲ್ಲಿ
ಬೇರೆಯದದ್ದೇ ತಿಳಿಯಲಿಲ್ಲ
ಆದರೂ ನಿನ್ನನ್ನು
ಸೇರಿಕೊಳ್ಳಲು ಕೋಗಿಲೆ
ಕಂಠದ ಆ ನಿನ್ನ
ಇಂಪಾದ ಧ್ವನಿಯನ್ನು
ಕೇಳಲು ನೀ ಬರುವ
ಹಾದಿಯನ್ನೇ ಕಾಯುತ್ತಿರುವೆ
ಗೆಳತಿ ಜಾತಕಪಕ್ಷಿಯಂತೆ...
ಶಂಕರ್ .ಎಂ 