Saturday, October 11, 2008

It's me

         ಹೊಸಪೇಟೆ ಹುಟ್ಟೂರು  ಆದರೂ...  ಓದಿದ್ದು  ಧಾರವಾಡ, ಮೈಸೂರು. ಈ  ಎರಡು  ಊರುಗಳು  ನನಗೆ  ನನ್ನತನವನ್ನ  ಹುಡುಕಲು  ಸಹಕಾರಿಯಾಗಿವೆ... ಆದ್ರೆ  ಒಮ್ಮೊಮ್ಮೆ  ಅನಿಸುತ್ತೆ  ಈ  ಜಗತ್ತು  ನನ್ನನ್ನು  ಹೇಗೆ  ನೋಡುತ್ತೆ, ಹೇಗೆ  ಸ್ವೀಕರಿಸುತ್ತಿದೆ  ಎಂದು ... I am  really Surprised about this Crazy World...
           M.Sc., degree ಮುಗಿಸಿ  ಕನಸುಗಳ  ಮಹಾನಗರಿ  ಬೆಂಗಳೂರಿನಲ್ಲಿ  ಕೆಲಸ  ಮಾಡಿರೋ  ನನಗೆ  ಹೈದರಾಬಾದ್  ಕರ್ನಾಟಕದ  ಹಸಿ-ಬಿಸಿ  ಆಸೆಗಳು, ಮಲೆನಾಡಿನ  ಮನಸು, ಮಾಯಾನಗರಿ  ಚತುರತೆ, ಈ  ಎಲ್ಲವು   ನನ್ನನ್ನ  ಏನು  ಮಾಡಲಾರಟಿವೆಯೋ...?  ವಿದ್ಯಾನಗರಿ ಚೋಟ -ಬಾಂಬೆ  ಹುಬ್ಬಳ್ಳಿಯ  Deshpande   Foundation ನಲ್ಲಿ  entrepreneurship fellowship trainee ಯಾಗಿ ಕಲಿತದ್ದಾಯಿತು, ಈಗ ಕುಂದಾಪುರದ FSL-India (Field Services and Inter-cultural Learning) ಎಂಬ ಸ್ವಯಂ ಸೇವಾ ಸಂಸ್ಥೆಯಲ್ಲಿ Chief Coordinator ಎಂಬ ಪಟ್ಟಕ್ಕೆ ಜೋತುಬಿದ್ದು ವಿದೇಶಿಯರ ಜೊತೆಗೂಡಿ ಕೆಲಸ  ಮಾಡಿದ್ದಾಯಿತು, ಮಕ್ಕಳ  ಹಕ್ಕುಗಳ  ಕ್ಷೇತ್ರದಲ್ಲಿ ಕೆಲಸ  ಮಾಡಿ,  ಈಗ  Xindia Steels Limited ನಲ್ಲಿ Officer ಹುದ್ದೆಯನ್ನು ನಿರ್ವಹಿಸಿದ್ದೇನೆ. 
     ಈ ಎಲ್ಲದರ ಮಧ್ಯೆ ನನ್ನಲ್ಲಿ ಒಂದು ಪ್ರಶ್ನೆ ಕಾಡ್ತಾನೆ ಇತ್ತು ಅದೇನಪಾ ಅಂದ್ರೆ ನಾನು ಅಂದುಕೊಂಡಿರೋ ಕೆಲಸ ಸಿಗುತ್ತೋ, ಇಲ್ವೋ ಅಂತ !   ಅದು ಸಿಗೋವರೆಗೂ ಏನಾದ್ರು ಮಾಡಲೇ ಬೇಕಾಗಿತ್ತು so ಕಾಲೇಜು ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನದ ಬಗ್ಗೆ ತರಬೇತಿ ಕೊಡುತ್ತ ಒಬ್ಬ ವೃತ್ತಿ ನಿರತ ತರಬೇತುದಾರನಾಗಿ ರೂಪುಗೊಂಡೆ, ಅದೇ ಸಮಯಕ್ಕೆ ಹುಬ್ಬಳ್ಳಿಯ ಒಂದು ಸಂಸ್ಥೆಯಲ್ಲಿ ಅಪ್ತಸಮಾಲೊಚಕನಾಗಿ, ತರಬೇತುದಾರನಾಗಿ ಕೆಲಸ ಮಾಡ್ತಿರೋವಾಗಲೇ ನನ್ನ ನೆಚ್ಚಿನ ಮಡದಿ ಅನ್ನಪೂರ್ಣ ನಮ್ಮ ಮನೆಸೇರಿದ್ಲು. ಅವ್ಳು ಬಂದು ಕೆಲವೇ ದಿನಗಳಲ್ಲಿ ಬಾಗಲಕೋಟೆಯ ಪ್ರಸಿದ್ಧ  S Nijalingappa Medical College and Hanagal Kumareshwara Hospitalನಲ್ಲಿ ಮಾನಸಿಕ ಆರೋಗ್ಯ ಚಿಕಿತ್ಸಾ ವಿಭಾಗದಲ್ಲಿ Clinical Psychologist (ಮನಃಶಾಸ್ತ್ರಜ್ಞನಾಗಿ) ಕೆಲಸ ಮಾಡಲು ಬುಲಾವು ಬಂತು ಯಾವುದೇ ಅಡೆತಡೆಗಳಿಲ್ಲದೆ ನನ್ನ ನೆಚ್ಚಿನ ಕೆಲಸ ಮಾಡ್ತಾ ಇರುವಾಗ ನನ್ನ ಕನಸಿನ ಕೆಲಸದ ನೋಟಿಫಿಕೇಶನ್ ಆಯ್ತು ಅರ್ಜಿ ಹಾಕಿದೆ ಹಿರಿಯರ ಆಶೀರ್ವಾದದಿಂದ ಸರಕಾರಿ ನೌಕರೀನು ಸಿಕ್ತು. ಸಧ್ಯಕ್ಕೆ ವೈಜ್ಞಾನಿಕ ಅಧಿಕಾರಿಯಾಗಿ ಮತ್ತೆ ಬೆಂಗಳೂರು ಸೇರಿಕೊಂಡಿದೀನಿ ...