Wednesday, October 3, 2012

ಕಸದ ಬುಟ್ಟಿಗೆ ಎಸೆಯುವ ಮುನ್ನ

 ಏನು ಗೆಳತಿ 

ಸುಮ್ಮನೆ ಕಾಯುಸುತ್ತಿರುವೆ 

ಕಣ್ಣ ರೆಪ್ಪೆಯಲ್ಲೇ ಸರಿದಾಡುತ್ತಿರುವೆ 

ಆದರೂ ನೋಡಲಿಲ್ಲ ,

ಒಮ್ಮೆಯೂ ಕೇಳಲಿಲ್ಲ ,

ನನ್ನ ಸಂತಸ ಕ್ಷಣಗಳ 

ಸುಂದರ ಬದುಕಿನ 

ಚಿತ್ರವನ್ನ, ನಕ್ಷೆಯನ್ನ 

ಪದಗಳು ಇಲ್ಲವಾಗಿವೆ 

ಮಾತು ಬರಿದಾಗಿದೆ 

ಬರೆದ ಪತ್ರ ಇನ್ನೂ 

ನನ್ನ ಕೈಯಲ್ಲೇ ಇದೆ 

ಕಸದ ಬುಟ್ಟಿಗೆ ಎಸೆಯುವ ಮುನ್ನ 

ತಿಳಿಯ ಪಡೆಸುವೆನು 

ನನ್ನ ಪ್ರೀತಿಯನ್ನು.
                             ನಿನ್ನವನು   ಎಂ. ಶಂಕರ್